ಕೆ. ಕಲ್ಲಹಳ್ಳಿಯಲ್ಲಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ವಾರ್ಷಿಕೋತ್ಸವ ಸಂಭ್ರಮ ಕೆ. ಕಲ್ಲಹಳ್ಳಿ, ಆ. 4: ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ನಿರ್ಮಾಣವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇವಸ್ಥಾನದ ವಾರ್ಷಿಕೋತ್ಸವವನ್ನು ಗ್ರಾಮಸ್ಥರು ಭಕ್ತಿ-ಶ್ರದ್ಧೆಯಿಂದ ಆಚರಿಸಿದರು. ಕಾರ್ಯಕ್ರಮವು ಬೆಳಗಿನ ಜಾವ ವಿಶೇಷ ಹೋಮ, ಅಭಿಷೇಕ, ದೇವಿಯ ವಿಶೇಷ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಬಳಿಕ ನಡೆದ ಮಹಾದಾಸೋಹದಲ್ಲಿ ಗ್ರಾಮದ ಸಕಲ ಭಕ್ತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಈ ಪುಣ್ಯ ಸಮಾರಂಭದಲ್ಲಿ ಹಿರೇಹಡಗಲಿಯ ಹಾಲಸ್ವಾಮೀಜಿ ಸಂಸ್ಥಾನ ಮಠದ ಉಭಯ ಪೂಜ್ಯರಾದ ಪರಮಪೂಜ್ಯ ಶ್ರೀ ಅಮೃತೇಶ್ವರ ಶ್ರೀಗಳು ಹಾಗೂ ಶ್ರೀ ಮೌನ ಋಷಿ ಗುರುಗಳು ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಧರ್ಮ, ಭಕ್ತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ತಮ್ಮ ಆಶೀರ್ವಚನದಲ್ಲಿ ತಿಳಿಸಿದ ಪೂಜ್ಯರು, ಎಲ್ಲರೂ ಸನ್ಮಾರ್ಗದಲ್ಲಿ ಸಾಗುವಂತೆ ಕರೆ ನೀಡಿದರು. ತದನಂತರ ಉಭಯ ಪೂಜ್ಯರು ಮಹಾದಾಸೋಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿತರಣೆ ಮಾಡುವ ಮೂಲಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀ...
ಮಕ್ಕಳಾ ಜೊತೆಗೆ ಸದಾ ಮಗುವಾದವನೇ..ಮಗುವಿನಂಥ ಮನಸ ಹೊತ್ತ ದಿವ್ಯ ಸಂತನೇ.ವಿಶ್ವಾರಾಧ್ಯನೇ ಹಾಲವಿಶ್ವಾರಾಧ್ಯನೇ...ಮೌನ ಋಷಿಯಾಗಿ ಮಮತೆ ಮಳೆಯಾದವನೇ!
ಮಕ್ಕಳಾ ಜೊತೆಗೆ ಸದಾ ಮಗುವಾದವನೇ.. ಮಗುವಿನಂಥ ಮನಸ ಹೊತ್ತ ದಿವ್ಯ ಸಂತನೇ. ವಿಶ್ವಾರಾಧ್ಯನೇ ಹಾಲವಿಶ್ವಾರಾಧ್ಯನೇ... ಮೌನ ಋಷಿಯಾಗಿ ಮಮತೆ ಮಳೆಯಾದವನೇ! ಗಿಡ ಮರ ಬೆಟ್ಟಕಾಡೇ ನಿನ್ನಾಶ್ರಮವೂ... ಮುಗ್ಧಪ್ರಾಣಿ ಒಡನಾಟವೇ ನಿನ್ನ ಪೂಜೆಯು. ಸದಾ ನಗುವ ಹೊತ್ತು ನಡೆವ ನೀನೇ ಧನ್ಯನು. ಮೃದು ಮಾತಿನಲ್ಲೇ ಸೆಳೆವ ಪೂರ್ಣಚಂದ್ರನು. ವಿಶ್ವರೂಪನೇ...ಸ್ವಾಮೀ ವಿಶ್ವಾರಾಧ್ಯನೇ. ಮೌನ ಋಷಿಯಾಗಿ ನಮಗೆ ಗುರುವಾದವನೇ. ಅಷ್ಟಾವರಣ ಷಟಸ್ಥಲ ಪಂಚಾಚಾರವೂ.. ಬೇಕಾ ನಮಗೆ ಮೋಕ್ಷಕೊಂದು ಲಿಂಗಪೂಜೆಯು. ಸಾಕಲ್ಲವೇ ಪ್ರೀತಿ ಮಮತೆ ಸಹಬಾಳ್ವೆಯೂ ನೀನೇ ತಾನೇ ದಾರಿ ತೋರ್ವ ಬೆಳಕೆಲ್ಲವೂ.. ವಿಶ್ವರೂಪನೇ...ಸ್ವಾಮೀ ವಿಶ್ವಾರಾಧ್ಯನೇ.. ಮೌನ ಋಷಿಯಾಗಿ ನಮಗೆ ಗುರುವಾದವನೇ. ಗೀತೆ ರಚನೆ: ನಾಗರಾಜ್ ಜಿಎಂ, ಹಿರೇಕುಂಬಳಗುಂಟೆ ...