Skip to main content

Posts

ಮಕ್ಕಳಾ ಜೊತೆಗೆ ಸದಾ ಮಗುವಾದವನೇ..ಮಗುವಿನಂಥ ಮನಸ ಹೊತ್ತ ದಿವ್ಯ ಸಂತನೇ.ವಿಶ್ವಾರಾಧ್ಯನೇ ಹಾಲವಿಶ್ವಾರಾಧ್ಯನೇ...ಮೌನ ಋಷಿಯಾಗಿ ಮಮತೆ ಮಳೆಯಾದವನೇ!

ಮಕ್ಕಳಾ ಜೊತೆಗೆ ಸದಾ ಮಗುವಾದವನೇ.. ಮಗುವಿನಂಥ ಮನಸ ಹೊತ್ತ ದಿವ್ಯ ಸಂತನೇ. ವಿಶ್ವಾರಾಧ್ಯನೇ ಹಾಲವಿಶ್ವಾರಾಧ್ಯನೇ... ಮೌನ ಋಷಿಯಾಗಿ ಮಮತೆ ಮಳೆಯಾದವನೇ!  ಗಿಡ ಮರ ಬೆಟ್ಟಕಾಡೇ ನಿನ್ನಾಶ್ರಮವೂ... ಮುಗ್ಧಪ್ರಾಣಿ‌ ಒಡನಾಟವೇ ನಿನ್ನ ಪೂಜೆಯು. ಸದಾ ನಗುವ ಹೊತ್ತು ನಡೆವ ನೀನೇ ಧನ್ಯನು. ಮೃದು ಮಾತಿನಲ್ಲೇ ಸೆಳೆವ ಪೂರ್ಣಚಂದ್ರನು. ವಿಶ್ವರೂಪನೇ...ಸ್ವಾಮೀ ವಿಶ್ವಾರಾಧ್ಯನೇ. ಮೌನ ಋಷಿಯಾಗಿ ನಮಗೆ ಗುರುವಾದವನೇ. ಅಷ್ಟಾವರಣ ಷಟಸ್ಥಲ ಪಂಚಾಚಾರವೂ.. ಬೇಕಾ ನಮಗೆ ಮೋಕ್ಷಕೊಂದು ಲಿಂಗಪೂಜೆಯು. ಸಾಕಲ್ಲವೇ ಪ್ರೀತಿ ಮಮತೆ ಸಹಬಾಳ್ವೆಯೂ ನೀನೇ ತಾನೇ ದಾರಿ ತೋರ್ವ ಬೆಳಕೆಲ್ಲವೂ.. ವಿಶ್ವರೂಪನೇ...ಸ್ವಾಮೀ ವಿಶ್ವಾರಾಧ್ಯನೇ.. ಮೌನ ಋಷಿಯಾಗಿ ನಮಗೆ ಗುರುವಾದವನೇ. ಗೀತೆ ರಚನೆ: ನಾಗರಾಜ್ ಜಿಎಂ, ಹಿರೇಕುಂಬಳಗುಂಟೆ ...

ತ್ರಿವಿಧ (ಧರ್ಮ, ಅನ್ನ, ಜ್ಞಾನ) ದಾಸೋಹಮೂರ್ತಿ ಶ್ರೀ ಶ್ರೀ ಶ್ರೀ ಷ.ಬ್ರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ ಜೀವನ ಚರಿತ್ರೆ

ತ್ರಿವಿಧ (ಧರ್ಮ, ಅನ್ನ, ಜ್ಞಾನ) ದಾಸೋಹಮೂರ್ತಿಗಳು ಶ್ರೀ ಶ್ರೀ ಶ್ರೀ ಷ.ಬ್ರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಹಾಲಸ್ವಾಮಿ ಬೃಹನ್ಮಠ, ರಾಂಪುರದ ಪಂಚಮ ಪಟ್ಟಾಧಿಕಾರಿಗಳು "विद्या ददाति विनयं, विनयाद् याति पात्रताम्। पात्रत्वात् धनमाप्नोति, धनात् धर्मं ततः सुखम्॥" "ಗುರುವೇ ಸರ್ವಲೋಕಾನಾಂ, ಭಿಷಜೇ ಭವರೋಗಿಣಾಂ। ನಿಧಯೇ ಸರ್ವವಿದ್ಯಾನಾಂ, ಶ್ರೀ ದಕ್ಷಿಣಾಮೂರ್ತಯೇ ನಮಃ॥" ಧರ್ಮ, ಅನ್ನ ಹಾಗೂ ಜ್ಞಾನ ದಾಸೋಹಗಳ ಮೂಲಕ ಸಮಾಜೋದ್ಧಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡು, ಸನಾತನ ಧರ್ಮದ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತಿದ ಪರಮಪೂಜ್ಯ ಶ್ರೀ ಶ್ರೀ ಷ.ಬ್ರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಹಾಲಸ್ವಾಮಿ ಬೃಹನ್ಮಠ, ರಾಂಪುರದ ಐದನೇ ಪಟ್ಟಾಧಿಕಾರಿಗಳಾಗಿ ಆರಾಧ್ಯ ಸ್ಥಾನವನ್ನು ಅಲಂಕರಿಸಿದ ಮಹನೀಯರು. ಇವರು ಇದೇ ಮಠದ ಚತುರ್ಥ ಪಟ್ಟಾಧಿಕಾರಿಗಳಾದ ಪರಮಪೂಜ್ಯ ಲಿಂಗೈಕ್ಯ ಸದ್ಗುರು ಶಿವಯೋಗಿ  ಶ್ರೀ  ವಿಶ್ವರಾಧ್ಯ ಹಾಲಸ್ವಾಮಿಗಳು ಹಾಗೂ ಮಾತೃಶ್ರೀ ಗಿರಿಜಾಂಬ ಅವರ ಪುಣ್ಯ ದಂಪತಿಗಳಿಗೆ 27 ಜುಲೈ 1965 ರಂದು ಜನಿಸಿದರು. ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ, ವಿನಯ, ಶಿಸ್ತು ಮತ್ತು ಅಧ್ಯಯನಶೀಲತೆಯನ್ನು ಅಳವಡಿಸಿಕೊಂಡು ಬೆಳೆಯುತ್ತಾ, ಭ...