Skip to main content

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024


ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು

ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ 
"ಶ್ರೀ ಗುರು ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ - 2024 ಮಹೋತ್ಸವದ"
"ಆಹ್ವಾನ ಪತ್ರಿಕೆ"

ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು.

ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ
ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು.
ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾಧ್ಯ, ಡೊಳ್ಳು, ಭಜನಾಮೇಳ ವೈಭವದಿಂದ ಪಾಲ್ಗೊಂಡು ಜಾತ್ರೆಯ ವಿಶೇಷ ಕಾರ್ಯಕ್ರಮಗಳು ಜರುಗುವವು.

ಕಾರ್ಯಕ್ರಮಗಳ ಸಾನಿಧ್ಯ :

ಶ್ರೀ ಷ ಬ್ರ॥ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು ಮಾನಿಹಳ್ಳಿ ಪುರವರ್ಗಮಠ, ಮಾನಿಹಳ್ಳಿ, 

ಶಿವಯೋಗಿ ತಪೋನಿಧಿ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು, 
ಶ್ರೀ ಗುರುಹಾಲಸ್ವಾಮೀಜಿ ಮಹಾಸಂಸ್ಥಾನ, ರಾಂಪುರ.

ಶ್ರೀ ಷ!ಬ್ರ॥ ಮರುಳರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಂಸ್ಥಾನ ಕಟ್ಟಿಮನಿ ಹಿರೇಮಠ, ಅಳವಂಡಿ,

ಶ್ರೀಮಠದ ಹಿರಿಯ ಮತ್ತು ಕಿರಿಯ ಪರಮಪೂಜ್ಯರು.

ಮುಖ್ಯ ಅತಿಥಿಗಳು
ಶ್ರೀ ವೇಮೂ॥ ಗುರುಮೂರ್ತಿ ಸ್ವಾಮಿಗಳು, ಸಂಸ್ಥಾನ ಕಟ್ಟಿಮನಿ ಹಿರೇಮಠ, ಅಳವಂಡಿ
ಶ್ರೀ ಜಿಎಮ್. ಹಿರೇಮಠ ವಕೀಲರು ಹಡಗಲಿ. 
ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿನಿಧಿಗಳು.

*ಕಾರ್ಯಕ್ರಮಗಳು *

ದಿನಾಂಕ : 17-10-2024 ನೇ ಗುರುವಾರ
ಬೆಳಿಗ್ಗೆ 6-00 ಗಂಟೆಗೆ ಶ್ರೀಗೆ ಹುಣ್ಣಿಮೆ ದಿನದಂದು ನೂತನ ದಾಸೋಹ ಮಂದಿರದ ಲೋಕಾರ್ಪಣೆ.

ದಿನಾಂಕ : 09-10-2024 ರಿಂದ 19-10-2024 ಶ್ರೀಮಠದ  ಲಿಂ|| ಜೀವೈಕ್ಯ ಹಾಲವೀರಪ್ಪಜ್ಜ ಹಾಲಸ್ವಾಮಿಗಳ ಕರ್ತೃಗದ್ದುಗೆಗೆ ಅಭಿಷೇಕ ಜರುಗುವುದು. ಹಾಗೂ 11 ದಿನಗಳ ಪರಾಂತ ಏಕಾದಶಿ ರುದ್ರಹೋಮ ಸಾಯಂಕಾಲ 7-00 ಗಂಟೆಯಿಂದ ಶ್ರೀ ಷ.ಬ್ರ॥ ಮರುಳರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಸಂಸ್ಥಾನ ಕಟ್ಟಮನಿ ಹಿರೇಮಠ. ಅಳವಂಡಿ ಹಾಗೂ ಶ್ರೀಮಠದ ಯುವ ಪೂಜ್ಯರುಗಳಿಂದ ಅಧ್ಯಾತ್ಮಿಕ ಪ್ರವಚನ ಹಾಗೂ ಸಂಗೀತ : ಶ್ರೀ ವೇ ಮೂ॥ ಸಿದ್ದಲಿಂಗಸ್ವಾಮಿ ಪಿ. ಹಿರೇಮಠ ಸಾ। ಹಿರೇಕೊಳಚಿ,  ತಬಲ : ಶ್ರೀ ಸಿದ್ಧಲಿಂಗೇಶ ಯತ್ತಿಹಳ್ಳಿ ಸಾ|| ಹೊಳಲು ಇವರುಗಳಿಂದ ಜರುಗುವುದು.

ದಿನಾಂಕ 19-10-2024 ನೇ ಶನಿವಾರ ಮಧ್ಯಾಹ್ನ ಮಹಾದಾಸೋಹಿ ಲಿಂ।। ಶ್ರೀಮತಿ ಹಾಲಮ್ಮ ತಾಯಿಯವರ 13ನೇ ವರ್ಷದ ಪುಣ್ಯಾರಾಧನೆ ಹಾಗೂ ರಾತ್ರಿ 10-30ಕ್ಕೆ 'ಮುಳ್ಳುಗದ್ದುಗೆ ಮಹೋತ್ಸವ" 

ದಿನಾಂಕ 20-10-2024 ನೇ ರವಿವಾರ ಸಾಯಂಕಾಲ 'ರಥೋತ್ಸವ ರಾತ್ರಿ 8-00 ಗಂಟೆಗೆ ಭಕ್ತಿ ಭಾವಗೀತೆಗಳ ಸಂಗೀತ ಕಾರ್ಯಕ್ರಮ ಜರುಗುವುದು.

ದಿನಾಂಕ : 21-10-2024 ನೇ ಸೋಮವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ವದಲ್ಲಿ ಶಿವದೀಕ್ಷೆ (ಆಯ್ಯಚಾರ) ನಂತರ ಬೆಳಿಗ್ಗೆ 11-30 ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹಗಳು ಜರುಗುವುದು. 
ಸಾಯಂಕಾಲ 4-00 ಗಂಟೆಗೆ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಕುಸ್ತಿ ಪಂದ್ಯಗಳು, ರಾತ್ರಿ ವಿಶೇಷ ವಾಧ್ಯಗಳೊಂದಿಗೆ ಕಡುಬಿನ ಕಾಳಗ ಜರುವುದು.

ಗುರುರಕ್ಷೆ :
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಸೇವಕರಿಗೆ, ನಿವೃತ್ತ ನೌಕರರಿಗೆ ಶ್ರೀಗಳಿಂದ ಸನ್ಮಾನ.

ಶ್ರೀಮಠದ ದಾಸೋಹ ಕ್ಕೆ ದಾನ ಮಾಡಿದ ಗ್ರಾಮಗಳು:  ಹಿರೇಹಡಗಲಿ, ಕಾಂತೇಬೆನ್ನೂರು. ಮಾಗಳ, ಹೊಸಳ್ಳಿ, ಅಂಗೂರು, ಕೋಟಿಹಾಳ, ಮಕರಬ್ಬಿ, ಅರಳಹಳ್ಳಿ, ಅರಳಹಳ್ಳಿತಾಂಡ, ಕಾಳೇನಹಳ್ಳಿ, ಬೀರಬ್ಬಿ, ಗಿರಿಯಾಪುರ, ಗಿರಿಯಾಪುರಮಠ, ಕೆ.ವೀರಾಪುರ, ದಾಸನಹಳ್ಳಿ, ನಡುವಿನಹಳ್ಳಿ, ಕಳಸಾಪುರ, ಹ್ಯಾರಡ, ಹಗರನೂರು, ವಡ್ಡನಹಳ್ಳಿ ತಾಂಡ, ಶಿವಪುರ, ಕೆ.ಅಯ್ಯನಹಳ್ಳಿ, ಅಲ್ಲಿಪುರ, ರಾಜವಾಳ, ಹೊನ್ನೂರು ಹಾಲುತಿಮಲ್ಲಾಪುರ,ತಿಪ್ಪಾಪುರ, ಬಸರಕೋಡ ತಾಂಡ, ಉಪನಾಯಕನಹಳ್ಳಿ, ಶಿವಲಿಂಗನಹಳ್ಳಿ, ದೇವಗೊಂಡನಹಳ್ಳಿ, ಮೀರಾಕೊರ್ನ ಹಳ್ಳಿ, ವಿನೋಬನಗರ, ಗುಜನೂರು, ಮುದೇನೂರು, ಹೊಳಗುಂದಿ, ಕೊಯಲಾರಗಟ್ಟಿ, ಸೋವೇನಹಳ್ಳಿ. ಕಾಗನೂರು, ಕೊಂಬಳಿ, ನವಲಿ ಹಿರೇಕೊಳಚಿ, ಚಿಕ್ಕಕೊಳಚಿ, ತಮಲಾಪುರ, ಮಸಲವಾಡ, ತುಂಬಿನಕೇರಿ, ಮಾನಿಹಳ್ಳಿ,ತುಂಬಿನಕೇರಿ ತಾಂಡ, ಹರಪನಹಳ್ಳಿ ತಾ। ಈಶಾಪುರ, ಹಾರಕನಾಳು ಹುಲಿಕಟ್ಟೆ, ಅಗ್ರಹಾರ, ಕರೇಕಾನಹಳ್ಳಿ, ಉದ್ದಗಟ್ಟಿ, ಚನ್ನಹಳ್ಳಿತಾಂಡ, ಹಾರಕನಾಳು ಸಣ್ಣತಾಂಡ, ತೊಗರಿಕಟ್ಟಿ, ಗೋವೇರಹಳ್ಳಿ, ಅಲಮರಸಿಕೇರಿ, ಮಾಡಲಗೇರಿ, ಬಂಡ್ರಿ, ಬಂಡ್ರಿತಾಂಡ, ಎರಡೆತ್ತಿನಹಳ್ಳಿ, ಕೂಲಹಳ್ಳಿ, ಬಾಗಳಿ, ಕೋಡಿಹಳ್ಳಿ, ಹೊಂಬಳಗಟ್ಟಿ, ಕಲ್‌ಬಾವಿಹಳ್ಳಿ,ಮತ್ತಿಹಳ್ಳಿ, ಸಾಸ್ವಿಹಳ್ಳಿ, ಹುಣ್ಣಿಹಳ್ಳಿ, ಕಡಬಗೇರಿ, ನಿಂಗಾಪುರ, ಹಂಪಾಪುರ, ಕೆ.ಕಲ್ಲಹಳ್ಳಿ, ಹಿರೇಮಜ್ಜಿಗೇರಿ, ಚಿಕ್ಕಮಜ್ಜಿಗೇರಿ, ಬೇವಿನಹಳ್ಳಿ,ಇಟ್ಟಿಗುಡಿ, ನೀಲಗುಂದ, ಯರಬಾಳು, ಬಂಡಿಕೇರಿತಾಂಡ, ಇಂಗಳಗುಂದಿ, ದುಗ್ಗಾವತಿ,ಕಂಚಿಕೇರಿ, ತಲವಾಗಲು, ಹಳ್ಳಿಕೇರಿ, ಮಾಗನಹಳ್ಳಿ ಚನ್ನಹಳ್ಳಿ, ವಲ್ಲಹಳ್ಳಿ, ಕಣಿವಿ, ಚಪ್ಪರದಹಳ್ಳಿ, ಹರಾಳು,ಕೋಣನಕಟ್ಟ, ಹುಣಸಿಕಟ್ಟಿ, ಹೊಸಕೋಟೆ, ಬೂದಿಹಾಳು, ಗಡಿಗುಡಾಳು, ಜಂಗಮತುಂಬಿಗೇರಿ,ಅಣಜಿಗೆರೆ, ತಲವಾಗಲು, ಶ್ರೀನಿವಾಸ ಪುರ, ಹಿರೇಮೇಗಳಗೇರಿ, ವಡ್ಡಹಳ್ಳಿ ದಾವಣಗೆರೆ ತಾ| ದಾವಣಗೆರೆ ಬೊರಗೊಂಡನಹಳ್ಳಿ ಮಹಾದೇವಪುರ, ಬಸವನಾಳು, ಶಿವಪುರತಾಂಡ, ಸೊಕ್ಕೆ, ತೂಲಹಳ್ಳಿ, ಹಿರೇಕುಂಬಳಗುಂಟೆ, ಹಾವೇರಿ ತಾ। ಹಾವೇರಿ, ಗುತ್ತಲ, ಬೆಳವಗಿ, ಮೇವುಂಡಿ, ರಾಣೇಬೆನ್ನೂರು ತಾ।। ರಾಣೇಬೆನ್ನೂರು,ಬೇಲೂರು, ಅಂಕಸಾಪುರ, ಹೀಲದಹಳ್ಳಿ ಉದ್ದಗಟ್ಟಿ, ಕುದರಿಹಾಳು, ನಂದಿಹರಳಿಹಳ್ಳಿ, ಮುಂಡರಗಿ ತಾ।ಡೋಣಿ, ಹಳ್ಳಿಕೇರಿ, ಪೇಠಾಲೂರು, ಕೊರ್ಲಹಳ್ಳಿ, ಕವಲೂರು, ಯಕ್ಲಾಸಾಪುರ, ಸಿಂಗಟಾಲೂರು, ಬೀಡನಾಳು, ಹಿರೇವಡ್ಡಟ್ಟಿ, ರೋಣ ತಾ।। ಸಂದಿಗವಾಡ, ಚಿಕ್ಕಮಣ್ಣೂರು, 'ಕನಕಗಿರಿ, ಹೊಸಪೇಟೆ ತಾ।। ಬ್ಯಾಲಕುಂದಿ, ಕೂಡ್ಲಿಗಿ ತಾ। ಗಿರಿಯಾಪುರ,ಜಾಗಟಗೇರಿ.

ವಿವಾಹ ಆಗಲು ಬಯಸುವವರು : 
ದಿನಾಂಕ 09-10-2024 ರ ಒಳಗಾಗಿ ಇವರಲ್ಲಿ ಹೆಸರನ್ನು ನೊಂದಾಯಿಸಿರಿ : 
ಶ್ರೀ ಗೀರೀಶ್ ಮೆಡಿಕಲ್ಸ್ 
ಮೊ.: 9901538016, 7619507103 
ಶ್ರೀ ಹಾಲೇಶ್ವರ ಮೆಡಿಕಲ್ಸ್ ಮೊ: 9916320086

ವಿವಾಹ ಆಗವಚ್ಛಿಸುವವರು : ಅಯಾ ಗ್ರಾಮ ಪಂಚಾಯಿತಿ ದೃಢೀಕರಣ ಪತ್ರ ಹಾಗೂ ಶಾಲೆ ದೃಢೀಕರಣವನ್ನು ಕಡ್ಡಾಯವಾಗಿ ತರತಕ್ಕದ್ದು.

ಬಾಲ್ಯವಿವಾಹ ಮತ್ತು ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ ವಧು ವರರಿಗೆ ಬಟ್ಟೆ ಮಾಂಗಲ್ಯ, ಕಾಲುಂಗುರ ಕಡಗಗಳನ್ನು ಕೂಡಲಾಗುವುದು. 

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಗುರುವಿನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರುವ.

                 ಕಾಂತೇಬೆನ್ನೂರು ಗ್ರಾಮಸ್ಥರು

 ‌‌‌                    ಕೆ.ಕಲ್ಲಹಳ್ಳಿ ಗ್ರಾಮಸ್ಥರು

                 ಹಿರೇಹಡಗಲಿ ಗ್ರಾಮಸ್ಥರು

       ಮಾಗಳ ಗ್ರಾಮಸ್ಥರು

     ಹಿರೇಹಡಗಲಿ ಗ್ರಾಮಸ್ಥರ ರಿಂದ ಜಾತ್ರೆ ಮೀಟಗ್

    ಬಾಗಳಿ ಗ್ರಾಮಸ್ಥರು


ಶ್ರೀ ಹಾಲಸ್ವಾಮಿಯ ರಥದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ಧ್ವಜವನ್ನು 1.25,000 ರೂ. ಗೆ  ಚನ್ನಬಸವ ಸ್ವಾಮಿ, ಹಿರೇಮಠ 
(ಹೂವಿನಹಡಗಲಿ) ಇವರಿಗೆ ಸಲ್ಲುತ್ತದೆ.

2024-2025 ನೇ ಸಾಲಿನ ಜಾತ್ರೆ ಮಹೋತ್ಸವದ
ಪ್ರಸಾದ ನಿಲಯದ ನಿರ್ಮಾಣಕ್ಕೆ ಧನ ಸಹಾಯ ನೀಡಿದ ದಾನಿಗಳು
ನೇತೃತ್ವ : ಶ್ರೀ ಸ.ಪಿ. ಪಾಲಸಿದ್ದೇಶ್ವರ ಸ್ವಾಮಿಗಳು ಹಾಗೂ ಶ್ರೀ ಸ.ಶಿ. ಹಾಲಶಂಕರ ಸ್ವಾಮಿಗಳ ಹಿರೇಹಡಗಲಿ

Popular posts from this blog

Hirehadagali Halaswamiji Jatre 2025/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2025

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ  "ಶ್ರೀ ಗುರು ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ ಮಹೋತ್ಸವದ - 2025 " "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ ಹಾಲನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...