Skip to main content

ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ ಮಠದ ಭಕ್ತರ ಪೂರ್ವಭಾವಿ ಸಭೆ.

ವಿಕ ಸುದ್ದಿಲೋಕ 
ನ್ಯಾಮತಿ ಃ  ಇತ್ತೀಚಿಗೆ ಲಿಂಗೈಕ್ಯರಾದ  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಕರ್ತೃಗದ್ದಿಗೆಯ ನಿರ್ಮಾಣ ಹಮ್ಮಿಕೊಳ್ಳುವ ಬಗ್ಗೆ  ಸೆಪ್ಟೆಂಬರ್ 20 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಂಪುರ ಕ್ಷೇತ್ರದ ಮಠದ ಆವರಣದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ನಾಡಿನ ಸರ್ವ ಭಕ್ತರ ಸಭೆಯನ್ನು ಕರೆಯಲಾಗಿದೆ ಎಂದು ಉಸ್ತುವರಿ ವಹಿಸಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಶ್ರೀ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ತಿಳಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸರ್ವ ಭಕ್ತಾಧಿಗಳು ಮಾಸ್ಕ್ ಕಡ್ಡಾವಾಗಿ ಧರಿಸಿರಬೇಕು, ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.

ವರದಿಯ ಕೃಪೆ:- ಎಮ್.ಎಸ್ ಹೋಳೇಮಠ