ರಾಂಪುರ ಕ್ಷೇತ್ರದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆಯಲ್ಲಿ ‘ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ಕುರಿತು ಸಿನಿಮಾ ಪೋಸ್ಟರ್ಗಳನ್ನು ಶುಕ್ರವಾರ ಅನಾವರಣಗೊಳಿಸುತ್ತಿರುವ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮತ್ತು ಚಿತ್ರ ತಂಡ.

ಮಧ್ಯ ಕರ್ನಾಟಕದ ಪುರಾಣ ಪ್ರಸಿದ್ದ ಸಿದ್ದಿ ಪುರುಷ ಪವಾಡ ಪುರುಷ , ಭಕ್ತರ ಆರಾಧ್ಯ ದೈವ ರಾಂಪುರ , ಬಸವಾಪಟ್ಟಣ , ಗುಂಡೇರಿ , ಹಿರಿಯೂರು ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ ‘ ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ’ ರುದ್ರ ಕಲ್ಲೊಡೆಯಾರ್ ಅವರ ನಿರ್ದೇಶನದಲ್ಲಿ ಅಕ್ಟೋಬರ್ 22 ರಂದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ ದೊರಕಲಿದೆ.
ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಇತಿಹಾಸ , ಚರಿತ್ರೆ , ಭಕ್ತಿ ಪ್ರಧಾನ ಸಾರುವ ಚಿತ್ರಗಳು ಕಾಣುತ್ತಿದ್ದವು ಅದರೆ ಇತ್ತೀಚಿನ ದಿನಗಳಲ್ಲಿ ಕೇವಲ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗಿರುವ ದಿನಮಾನಗಳಲ್ಲಿ ಭಕ್ತಿ ಪ್ರಧಾನ ಒಳಗೊಂಡ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ.
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ ಉದಾಹರಣೆಗಳಿವೆ. ಇಂತಹ ಸಿದ್ದಿಪುರುಷರ ಅನೇಕ ಪವಾಡಗಳು ಈಗಲೂ ಪ್ರಚಲಿತ. ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಬಗ್ಗೆ ಹಲವಾರು ವಿಚಾರಗಳನ್ನು ಅನೇಕ ಕೋನಗಳಲ್ಲಿ ಸನ್ನಿವೇಶ ಪರದೆಯ ಮೇಲೆ ತರಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ
Comments
Post a Comment