Skip to main content

ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿದೆ.

ಹೊನ್ನಾಳಿ ತಾಲೂಕಿನ ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಗಸ್ಟ್ ೨ ರಂದು ಹೊನ್ನಾಳಿ ನಗರದ ನೂತನ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿದೆ 
,ಹಾಲಸ್ವಾಮೀಜಿಯವರ ಭಕ್ತರು,ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಭಿರ ನಡೆಯಲಿದೆ,ಇದೇ ವೇಳೆ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಗುರುಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದ ಸಾನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ  ,ಹೊಟ್ಯಾಪುರದ ಗಿರಿಸಿದ್ದೇಶ್ವರ ಶಿವಚಾರ್ಯ  ಸ್ವಾಮೀಜಿಯವರಹಾಗೂ ರಾಂಪುರ ಮಹಾಸಂಸ್ಥಾನದ ಶ್ರೀಗಳಾದ ಶಿವಕುಮಾರ ಹಾಲಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಕ್ತದಾನ ಶಿಭಿರ ಹಾಗೂ ಗುರುಸ್ಮರಣೆ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಭಕ್ತರು ಉಪಸ್ಥಿತರಿರುತ್ತಾರೆ ಎಂದರು.
ಭಯ ಬೇಡ ; ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಎಂದು ಕೆಲವರಲ್ಲಿ ಗೊಂದಲ ಇದೆ, ಆದರೆ ವ್ಯಕ್ಸಿನ್ ಹಾಕಿಸಿಕೊಂಡ 14 ದಿನದ ನಂತರ ರಕ್ತದಾನ ಮಾಡಬಹುದು ಎಂದು ವಿವರಿಸಿದರು.

ಹಾಲಸ್ವಾಮಿ ಮಠದ ಭಕ್ತರು