ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ,
ಗುರುವಿಲ್ಲದ ಗುರಿ ನೀರಿಲ್ಲದ ಬಾವಿ ಆದ್ಯಾತ್ಮವಿಲ್ಲದ ಜೀವನ ಮುಕ್ತಿ ದಾರಿ ತೋರಿಸುವ ಯನ್ನ ಮನದ ಒಡೆಯ ಭವರೋಗ ವೆದ್ಯ ನೆಡೆದಾಡುವ ದೇವರು ರಾಂಪುರ ಮಠದ ಪೀಠಾಧ್ಯಕ್ಷರು ಅದ ಲಿಂಗೈಕ್ಯ " ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು " ನಮ್ಮ ಮನೆಯ ಬೆಳಕು ನಿಮ್ಮ ಪಾದದ ಸೋಂಕಿದರೆ ಅ ಮನೆ ಪಾವನ ನಿಜಕ್ಕೂ ನಿಮ್ಮ ಕೃಪೆಇಂದ ಎಷ್ಟೋ ಬಗೆ ಹರಿಯದ ಸಮಸ್ಯೆಗಳನ್ನು ನಿಮ್ಮ ಕೃಪೆಯೆಂದ ಬಗೆಹರಿಸಿ ಭಕ್ತರ ಹೃದಯ ಸಿಂಹಾಸನದಲ್ಲಿ ಪವಡಿಸಿದ ಮಹಾ ಗುರುವೆ, ಗುರುವು ಎಂದರೆ ಗೊತ್ತಿಲ್ಲದ ವಿಚಾರಗಳನ್ನು ಅರುವುದು ನಿಮ್ಮ ಬಳಿ ಎಂತಹ ಕಷ್ಟಗಳನ್ನು ತಂದರು ಅದಕ್ಕೆ ಒಂದು ಪರಿಹಾರ ಕೊಡುತ್ತಿದ್ದೀರಿ ಇನ್ನು ಯಾರ ಬಳಿ ಕೇಳಲಿ ಯಾರು ಪರಿಹರಿಸುವರು ಯನ್ನ ಕುಲದೊಡೆಯ ನಿಮ್ಮ ಪಾದಕೆ ಹಣೆ ಹಚ್ಚಿ ನಮಸ್ಕರಿಸಿದ ನಾವೇ ಧನ್ಯ ನೀವು ಕೊಟ್ಟ ಅ ಸಲಹೆ ಪರಿಹಾರಗಳು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಗುರುದೇವ ನಿಮ್ಮ ನಂಬಿ ಬಂದ ಭಕ್ತರನ್ನು ಎಂದು ಕೈ ಬಿಡಲಿಲ್ಲ ಜಾತಿ ಮತ ಕುಲಗಳನ್ನು ಮೀರಿಸಿದೆ ಎಲ್ಲರೂ ನಮ್ಮ ಭಕ್ತರು ಎಂದು ಕಾಪಾಡಿದೆ ನಿಮ್ಮ ಅಳಿವು ನಮಗೆ ಅಳಿಸಲಾಗದ ಅಚ್ಚು ಆಗಿ ಉಳಿದಿದೆ ನೀವು ಭಗವಂತನ ಸಾನಿಧ್ಯ ಸೇರಿದರು ನೀವು ಈ ನಾಡಿನ ಭಕ್ತರ ಹೃದಯ ಸಿಂಹಾಸನದಲ್ಲಿ ನೆಲೆಸಿರುವ ನಂಬಿಕೆ ನಿಮ್ಮ ಹೆಸರಿನಲ್ಲಿ ನಮ್ಮ ಕಾಯಕ ನೆಡೆಯುತ್ತಿದೆ ನಿಮ್ಮ ಪವಾಡ ಎಂದೆಂದಿಗೂ ಅಜರಾಮರ ನಿಮ್ಮ ಪಾದವ ನಂಬಿ ಬಂದ ಭಕ್ತರಿಗೆ ನೀವು ಕೊಡುವ ಅ ಗುಲಗಂಜಿ ತೂಕದ ಭಸ್ಮವೆ ಸಾಕು ಅದೆಂತ ಕಷ್ಟವಿರಲಿ ಕ್ಷಣ ಮಾತ್ರದಲ್ಲಿ ದೂಳಿಪಟ ನಿಮ್ಮ ನಂಬಿದ ಭಕ್ತರನ್ನು ನೀವೇ ಉದ್ಧರಿಸಿ ಕಾಯಬೇಕು ಗುರುದೇವ ನಿಮ್ಮ ಪಾದಕಮಲಗಳಿಗೆ ಈ ಭಕ್ತನ ಶಿರಾ ಸಾಷ್ಟಾಂಗ ಕೋಟಿ ಕೋಟಿ ಪ್ರಣಾಮಗಳು ಪಡಮೂಡುತ್ತೇನೆ
Comments
Post a Comment