ವಿಶ್ವದಿಂದ ಕರೋನ ಮುಕ್ತಿಗಾಗಿ ಶ್ರೀ ಅಮೃತೇಶ್ವರ ಸ್ವಾಮೀಜಿಯವರ 21 ದಿನದ ಜಪಯಜ್ಞ ಇಂದು ಹೋಮದಲ್ಲಿ ಪೂರ್ಣಾಹುತಿ ನೀಡುವುದರ ಮುಖಾಂತರ ಪೂರ್ಣಗೊಂಡಿತು
ವಿಶ್ವದಿಂದ ಕರೋನ ಮುಕ್ತಿಗಾಗಿ ಶ್ರೀ ಅಮೃತೇಶ್ವರ ಸ್ವಾಮೀಜಿಯವರ 21 ದಿನದ ಜಪಯಜ್ಞ ಇಂದು ಹೋಮದಲ್ಲಿ ಪೂರ್ಣಾಹುತಿ ನೀಡುವುದರ ಮುಖಾಂತರ
ದಿನಾಂಕ:29-05-2021 ಪೂರ್ಣಗೊಂಡಿತು.
ಐತಿಹಾಸಿಕ ತಪೋಭೂಮಿ ಅನೇಕ ಮಹಾತ್ಮರು ಪಾದ ಸ್ಪರ್ಶಗೈದ ಪುಣ್ಯ ಭೂಮಿ , ಜೊತೆಗೆ ಗುರುಸೇವೆ ಗೈದು ತಾವೆ ಗುರುವಾಗಿ ಮಹಾಯೋಗಿಗಳಾಗಿ ತಮ್ಮಗುರುಗಳ ಕಿರ್ತೀಯನ್ನು ನಾಡಿನುದ್ದಗಲಕ್ಕೂ ಪಸರಿಸಿ ಗುರುಗಳ ಸ್ವರೂಪದ ದ್ಯೋತಕವಾಗಿ ಪವಾಡಪುರುಷ ಶ್ರೀ ಸದ್ಗರು ಶಿವಯೋಗಿ ರಾಂಪುರದ ಹಾಲಸ್ವಾಮಿಗಳ 250 ತೋರು ಗದ್ದುಗೆ ಶಾಖಮಠಗಳ ನಿರ್ಮಾಣ ಗೈದಂತ , ಹಠಯೋಗ ಸಿದ್ಧರು , ಮಹಾಮಹಿಮರು, ಶಿವಶರಣರು ,ಶಾಪನುಗ್ರಹ ಸಮರ್ಥರು ,
ಹಿರೇ ಹಡಗಲಿಯಲ್ಲಿ ಜೀವಂತ ಸಮಾದಿಸ್ಥರಾದ ಸದ್ಗುರು ಶಿವಯೋಗಿ ಹಾಲವೀರಾರ್ಯ ಶಿವಯೋಗಿಗಳ ಸನ್ನಿಧಾನದಲ್ಲಿ ಲೋಕಕಲ್ಯಾಣಕ್ಕಾಗಿ ಕರೋನ ನಿವಾರಣಾರ್ಥವಾಗಿ ಮತ್ತು ಶ್ರೀ ಅಮೃತೇಶ್ವರ ಶ್ರೀಗಳವರ ಒಂದು ಮಂಡಲ ಅನುಷ್ಠಾನ ಮುಕ್ತಾಯಕ್ಕಾಗಿ ಹಾಗೂ ಧನ್ವವಂತರಿ ಹೋಮವನ್ನು ನಡೆಸಲಾಯಿತು.
ಸಾನಿಧ್ಯದಲ್ಲಿ ಶ್ರೀಮಠದ ವೈಧ್ಯರತ್ನ ಆಯುರ್ವೇದ ಪಂಡಿತರಾದ ಸದ್ಗುರು ಶಿವಯೋಗಿ ಹಾಲಸೋಮೆಶ್ವರ ಶ್ರೀಗಳ ಹಾಗೂ ಕೃಷಿಋಷಿ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳ ಹಾಗೂ ಶಿವಶರಣ ಹಾಲ ಅಭಿಷೇಕ ಶರಣರ ಮತ್ತು ಶ್ರೀ ವಿಶ್ವಪಂಡಿತಾರಾಧ್ಯ ಶ್ರೀಗಳ ಮತ್ತು ಪ್ರಕಾಶ ಶಾಸ್ತ್ರಿಗಳು ರಾಚಯ್ಯ ಶಾಸ್ತ್ರಿಗಳು ಇನ್ನಿತರ ಸದ್ಭಕ್ತರೊಂದಿಗೆ ಸಮಾಜಿಕ ಅಂತರದೊಂದಿಗೆ ಮುಕ್ತಾಯಗೊಂಡಿತು..
Comments
Post a Comment