ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಠ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ಬೃಹನ್ಮಠ ರಾಂಪುರ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ-577234 ಬಸವಾಪಟ್ಟಣ ಗವಿಮಠ ಗುಂಡೇರಿ ಶಿಲಾಮಠ ಸದ್ಭಕ್ತ ಮಹಾಶಯರೆ ರಾಂಪುರ ಹಾಲಸ್ವಾಮಿಗಳವರ ಮಠ ಪಂಚಪೀಠಗಳಲ್ಲಿ ಒಂದಾದ ಶ್ರೀ ಕಾಶಿ ಪೀಠದ ಶಾಖಾಮಠಗಳಲ್ಲಿ ಒಂದಾಗಿದ್ದು, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಠವಾಗಿದೆ. ಶತಮಾನಗಳ ಇತಿಹಾಸ ಹೊಂದಿದ ಐದು ಗುರು ಪರಂಪರೆಗಳನ್ನೊಳಗೊಂಡ ತಲೆಮಾರುಗಳ ಗುರು ಲಕ್ಷಾಂತರ ಭಕ್ತರ ದುಃಖ ದುಮ್ಮಾನಗಳನ್ನು ಪರಿಹರಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಸಾವಿರಾರು ಭಕ್ತರು ನಿಯಮಿತವಾಗಿ ಆಮಾವಾಸ್ಯೆ, ಹುಣ್ಣಿಮೆಗಳಂದು ಮತ್ತು ಬಿಡುವಿನ ದಿನಗಳಲ್ಲಿ ಮಠಕ್ಕೆ ಆಗಮಿಸಿ, ಸ್ವಾಮಿಗಳವರ ದರ್ಶನ, ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಹಿಂದಿನ ಎಲ್ಲಾ ಗುರುವರ್ಯರು ಭಕ್ತರಿಗೆ ಆಶೀರ್ವಾದಗಳ ಜೊತೆಗೆ ಹಲವಾರು ರೋಗ-ರುಜಿನಗಳಿಗೆ ಆಯುರ್ವೇದದ ಔಷಧಗಳನ್ನು ನೀಡುತ್ತಾ, ಕೇವಲ ದೇಹದ ಖಾಯಿಲೆಗಳನ್ನಲ್ಲದೆ ಮನಸ್ಸಿನ ವ್ಯಾಧಿಗಳನ್ನೂ ದೂರಮಾಡಿದ್ದಾರೆ. ಬರುವ ಭಕ್ತರಿಗೆ ತೀರ್ಥ-ಪ್ರಸಾದಗಳ ಜೊತೆಗೆ ನಿರಂತರ ದಾಸೋಹ ವ್ಯವಸ್ಥೆಯೂ ಶ್ರೀ ಮಠದಲ್ಲಿದೆ. ಶ್ರೀಮಠದ ವತಿಯಿಂದ ವ್ಯವಸ್ಥಿತ ಗೋಶಾಲೆ ನಡೆಸಲ್ಪಡುತ್ತಿದ್ದು, ನೂರಾರು ಗೋವುಗಳ ಆಶ್ರಯ ತಾಣವಾಗಿದೆ. ಪ್ರತಿವರ್ಷ ರಥೋತ್ಸವ ನಡೆಯುತ್ತಿದ್ದು, 50 ಸಾವಿರಕ್ಕೂ ಮಿಕ್ಕಿ ಭಕ್...